💈🏹💈🏹💈🏹💈🏹💈 ನಮ್ಮೊಳಗಿನ ರಾವಣನಿಗೂ ರಾಮನ ವೇಷ ಮಾಡುವಾಸೆ 💈🏹💈🏹💈🏹💈🏹💈
ತಿಣಿಕಿದನು ಫಣಿರಾಯ ರಾಮಾ ಯಣದ ಕವಿಗಳ ಭಾರದಲಿ | ಕವಿ ನಾರಾಯಣಪ್ಪ ತಾನು ಮಹಾಭಾರತದ ಕಾವ್ಯವನ್ನು ಬರೆಯಲಾರಂಭಿಸುವಾಗ ತಾನು ಯಾಕೆ ರಾಮಾಯಣ ಕಾವ್ಯವನ್ನು ಬರೆಯುತ್ತಿಲ್ಲ ಎಂದು ಹೇಳುವುದಕ್ಕಾಗಿ ಬರೆದುಕೊಂಡ ಮಾತಿದು. ಈ ಭೂಮಿಯನ್ನು ಹೊತ್ತ ಆದಿಶೇಷನಾದ ಫಣಿರಾಜನು ರಾಮಾಯಣದ ಕಾವ್ಯಗಳನ್ನು ರಚಿಸಿದ ಕವಿಗಳ ಭಾರವನ್ನು ತಡೆದುಕೊಳ್ಳಲಾರದೆ ಒದ್ದಾಡಿದನು. ಆ ಭಾರಕ್ಕೆ ತಾನೂ ಒಂದು ತೂಕ ಆಗುವುದು ಬೇಡವೆಂದು ತನ್ನ ಹೆಸರನ್ನೂ ಮರೆಯಾಗಿಸಿ, ಮಹಾಭಾರತದ ಮೂಲ ಕಾವ್ಯವನ್ನು ಬರೆದ ವ್ಯಾಸರ ಮೇಲಿನ ಭಕ್ತಿಯಿಂದ ಅವರೆನಗೆ ತಂದೆಗೆ ಸಮನೆಂದು ತನಗೆ ಕುಮಾರ ವ್ಯಾಸ ಎಂದು ಹೆಸರನ್ನಿಟ್ಟುಕೊಂಡ. ಆದರೀಗ ಮತ್ತೆ ಫಣಿರಾಯ ತಿಣುಕಿದನು. ಅದಕ್ಕೆ ಕಾರಣ ಆ ಫಣಿರಾಯನ ಸಂತಾನವನ್ನೇ ಆಭರಣವನ್ನಾಗಿಸಿಕೊಂಡಿರುವ ಶಿವನ ಹೆಸರನ್ನಿಟ್ಟುಕೊಂಡ ಮಂಜುನಾಥ ಬಡಿಗೇರರ ನಾಟಕದ ತೂಕವೂ ಬಿತ್ತು. ರಾಮ ಭಕ್ತರ ಕತ್ತಲ ಕಣ್ಣಿಗೆ ಸೂರ್ಯವಂಶ ರಾಮನ ನಾಟಕಕ್ಕೆ ರವೀಂದ್ರ ಪೂಜಾರಿಯವರ ಬೆಳಕು ಚೆಲ್ಲಿತು. “ಅಭಿಜ್ಞಾ” ಸಂಸಾರವು ಆಡಿ ತೋರಿಸಿದ, ಮಂಜುನಾಥ ಎಲ್ ಬಡಿಗೇರ್ ನಿರ್ದೇಶದ, ಎಂ. ಎಲ್. ಶ್ರೀಕಂಟೇಶ ಗೌಡ ಇವರ ರಚನೆಯ ನಾಟಕ ಸೀತಾ ಸ್ವಯಂವರಮ್. ಇದು ಸಮಷ್ಟಿ ಸಂಸಾರದ ಮತ್ತೊಂದು ಸೃಷ್ಟಿ. ಇಡೀ ತಂಡದ ಪರಿಶ್ರಮ ಮತ್ತು ಫಲಿತಾಂಶವನ್ನು ನೋಡುವಾಗ ಹೊಟ್ಟೆಯ ಬಲಭಾಗದಲ್ಲೊಂದು ಹೆಮ್ಮೆ ಚಿಗುರುತ್ತದೆ. ಹೊಟ್ಟೆಯ ಎಡಭಾಗದಲ್ಲೊಂದು ಹೊಟ್ಟೆಕಿಚ್ಚೂ ಮೊಳಕೆಯೊಡೆಯುತ್ತದೆ. ಇಂಥ ಸಂಸಾರವೊಂದಕ್ಕೆ ತಾಳಿ ಕಟ್ಟುವ ಗಂಡೂ ಆಗದೆ, ಇಂಥ ಸಂಸಾರಕ್ಕೆ ಕತ್ತನ್ನೊವ ಹೆಣ್ಣೂ ಆಗದೇ, ಭೀಷ್ಮನಿಗೆ ಬಿಡುವ ಭಾಣವನ್ನು ಬತ್ತಳಿಕೆಯಲ್ಲಿ ಕಟ್ಟಿಕೊಂಡು, ಅದನ್ನು ಹೆಗಲಿಗೆ ಕಟ್ಟಿಕೊಂಡು ಮೂರು ಲೋಕದ ಗಂಡು ಅರ್ಜುನನಿಗಾಗಿ ಹುಡುಕುತ್ತಾ ಇರುತ್ತೇನೆ….! ಒಂದು ನಾಟಕದ ಇಡೀ ತಂಡದಲ್ಲಿ ಇಷ್ಟಾದರೂ ಜನ ಬೇಕು ಅಂತ ಲೆಕ್ಕ ಹಾಕಿ ಬೆರಳನ್ನು ಮಡಚಿಡುವುದಕ್ಕಿಂತ ಹೆಚ್ಚು ಈ ಅಭಿಜ್ಞಾ ತಂಡದ ಸಂಗೀತ ತಂಡವೇ ಇದೆ. ಅದೂ ಒಂದಷ್ಟು ವರ್ಷದಿಂದ ಸಂಗೀತವನ್ನು ಶಾಸ್ತ್ರೀಯವಾಗಿ ಕಲಿಯುತ್ತಿರುವವರು. ಇನ್ನು ಈ ಅಭಿಜ್ಞಾ ಎಂಬ ಬಳ್ಳಿಯ ತುದಿಯಲ್ಲಿ ಸೀತಾಸ್ವಯಂವರಮ್ ಎಂಬ ಕಲಾಕುಸುಮವನ್ನು ಅರಳಿಸಿದ ಮಂಜುನಾಥ ಬಡಿಗೇರ್ ಕಲ್ಲಾಗಿ ಬಿದ್ದಿರುವ ಅಹಲ್ಯೆಯನ್ನೂ ಅರಳಿಸಬಲ್ಲ ವಿಶ್ವಾಮಿತ್ರರು. ಆದರೆ ಕೌಸಲ್ಯ ಸುಪ್ರಜಾ ರಾಮ ಎಂದು ಕರೆದಾಗ ಒಂದೇ ಕರೆಗೆ ಎಚ್ಚರಾಗುವ, ಅರಮನೆಯನ್ನು ಬಿಟ್ಟು ಎಲೆಮೆನೆಯಲ್ಲಿ ಬದುಕುವ ಧೈರ್ಯ ಮಾಡುವ ಮನಸ್ಸಿರುವ ರಾಮನು ಬೇಕು ಅಷ್ಟೇ. ಒಬ್ಬ ವಿದ್ಯಾರ್ಥಿಯಲ್ಲಿ ನಿಜವಾಗಿಯೂ ಕಲಿಯುವ ತುಡಿತ ಒಂದಿದ್ದರೆ ಸಾಕಂತೆ ಗುರುವಾದವನು ತಾನೇ ವಿದ್ಯಾರ್ಥಿಯನ್ನು ಹುಡುಕಿಕೊಂಡು ಬರುತ್ತಾನೆ ಎಂದು ಶಾಸ್ತ್ರವೇ ಹೇಳುತ್ತದೆ. ಹಾಗಾಗಿಯೇ ನಿಜ ರಾಮನಲ್ಲಿ ನಿಜವಾದ ತುಡಿತ ಇತ್ತು, ನಿಜವಾದ ವಿಶ್ವಾಮಿತ್ರ ನಿಜವಾಗಿಯೂ ಬಂದರು. ಇಲ್ಲಿ ಕಾಣುವುದು ಅದುವೇ. ಈ ಅಭಿಜ್ಞಾ ತಂಡದವರಲ್ಲಿ ಕಲಿಯುವ ನಿಜವಾದ ತುಡಿತ ಇತ್ತು. ಹಾಗಾಗಿಯೇ ವಿಶ್ವಾಮಿತ್ರನಂಥ ಮಂಜುನಾಥ ಬಡಿಗೇರರು ಗುರುಗಳಾಗಿ ಒದಗಿ ಬಂದರು. ಸೀತಾಸ್ವಯಂವರಮ್ ಎಂಬ ಕಲಾಕುಸುಮ ಅರಳಿತು. ಇದೀಗ ಈ ಅರಳಿನಿಂತ ಕುಸುಮವು ಇನ್ನೂ ಮೊಗ್ಗಾಗುವುದಕ್ಕಿಂತ ಮುಂಚಿಂದಲೇ ನನಗೊಂದು ಮೋಹದ ಸಂಬಂಧ. ಹಾಗಾಗಿಯೆ ಈ ಕುಸುಮದ ಘಮವನ್ನು ಆಗಾಗಲಾದರೂ ಉಸಿರಾಡುವ ಸುಖಕ್ಕಾಗಿ ಒಂದಷ್ಟು ದೂರದಿಂದ ಉಸಿರುಕಟ್ಟಿಕೊಂಡು ಬರುತ್ತಿದ್ದೆ. ಮೊಗ್ಗಿಂದ ಅರಳುವಲ್ಲಿಯವರೆಗೆ ನೋಡುತ್ತಾ ಬಂದ ಹೆಮ್ಮೆ ನನ್ನದು. ನಾಟಕ ಪ್ರದರ್ಶನಗೊಂಡಾಗ ಒಮ್ಮೆ ಧೀರ್ಘ ಉಸಿರನ್ನೆಳೆದುಕೊಂಡು ತೃಪ್ತಿ ಪಡೆದ ದಿನ ಅದು. ಒಟ್ಟಂದದಲ್ಲಿ ಒಂದು ಇದೊಂದು ಚಂದದ ಗೆಲುವು. ಗೆದ್ದ ಇಡೀ ತಂಡಕ್ಕೆ ಅಭಿನಂದನೆಗಳು. ಕಳೆದು ಹೋದ ಕಾಲವನ್ನು ಇರುವ ಈ ಕಾಲಕ್ಕೆ ತಂದು ನಿಲ್ಲಿಸಿ ಕಳೆದು ಹೋದ ನಮ್ಮ ಈ ಮುಖಗಳನ್ನು ನಮಗೇ ತೋರಿಸುವ ಕಾರ್ಯದಲ್ಲಿ ಮಂಜುನಥ ಬಡಿಗೇರರು ಕಾಲಜ್ಞಾರಂತೆ ಕಾಣುತ್ತಾರೆ. ವಂಚನೆ ನಮ್ಮ ಕುಲದ ಧರ್ಮ ಎಂದು ಆಗಾಗ ನಮಗೆ ಚುಚ್ಚುವ ಆ ಹಿತವಾದ ನೋವು ನಮ್ಮನ್ನು ಆಗಾಗ ಎಚ್ಚರಿಸುವ ಗಾಯವೊಂದು ಅಲಂಕಾರದ ಚುಕ್ಕೆಯಾಗಿ ಮೂಡುತ್ತದೆ. ನಾಟಕದಲ್ಲಿ ಕಾಣುವವರು ರಕ್ಕಸರೇ ಆದರೂ ಆ ರಕ್ಕಸರು ಭಕ್ತರ ವೇಷದಲ್ಲಿರುವ ನಾವೇ ಆಗಿದ್ದೇವಲ್ಲಾ ಎಂಬ ಪ್ರಜ್ಞೆಯೊಂದು ಮೆಲ್ಲನೆ ಮೊಳೆಕೆಯೊಡುತ್ತದೆ. ನಮ್ಮೊಳಗಿನ ರಾವಣನಿಗೂ ರಾಮನ ವೇಷ ಮಾಡುವಾಸೆ. ಈ ನಮ್ಮ ಆಸೆಗೆ ಕನ್ನಡಿ ಹಿಡಿದು ತೋರಿಸಿಕೊಡುವ ಚಿಕಿತ್ಸಕ ಮನಸ್ಸು ಮಂಜುನಾಥ ಬಡಿಗೇರರದ್ದು. ಇನ್ನು ಈ ತಂಡದ ಮತ್ತು ನಾಟಕದ ಇನ್ನೊಂದು ಶಕ್ತಿ ರವೀಂದ್ರ ಪೂಜಾರಿ ಸರ್. ಯಾರು ಎಷ್ಟು ಕಾಣಬೇಕು ಯಾರು ಎಷ್ಟು ಹೊತ್ತು, ಹೇಗೆ ಕಾಣಬೇಕು ಎಂದು ನಿರ್ಧರಿಸಿ ಬೆಳಕಿನ ವಿನ್ಯಾಸ ಮಾಡಿ, ಇಡೀ ತಂಡಕ್ಕೆ ನಿಜವಾಗಿಯೂ ಬೆಳಕನ್ನು ಚೆಲ್ಲುವ ಮನಸ್ಸು ರವೀಂದ್ರ ಪೂಜಾರಿಯವರದ್ದು. ರಾಮನ ವೇಷದಲ್ಲಿರುವ ರಾವಣನಿಗೆ ತನ್ನ ನೆರಳನ್ನು ಕಾಣುವಂತೆ ಮಾಡಿಸಿದ್ದನ್ನು ಪ್ರೇಕ್ಷಕರಾದ ನಮ್ಮೊಳಗಿನ ರಾವಣನಿಗೆ ತೋರಿಸಿಕೊಟ್ಟ ಚಂದಕ್ಕೆ ಸೋತ ಮನಸ್ಸು ಮತ್ತೆ ಸೋತಿತು. ಇಡೀ ತಂಡದವರ ಪುಣ್ಯಕ್ಕೊಂದು ನಮಸ್ಕಾರ.
🏵️ ಸುಧಾಕರ ಜೈನ್ ಹೊಸಬೆಟ್ಟು ಗುತ್ತು. 29/03/2026.

No comments:
Post a Comment