Wednesday, August 29, 2018

★ಪ್ರೇಕ್ಷಕರ ಮೊಗದಲ್ಲಿ ಶ್ರೀ ರಾಮ ನಿರ್ಯಾಣದ ಭಾವಗಳು. ★ ಯಕ್ಷ ಸಂಭ್ರಮ ಟ್ರಸ್ಟ್ (ರಿ.) ಶಿರಸಿ ಈ ಸಂಸ್ಥೆಯಿಂದ ನಡೆದ ತಾಳಮದ್ದಳೆ ಸಪ್ತಾಹದ ಕೊನೆಯ ದಿನವಾದ, ದಿನಾಂಕ 26/08/2018 ರಂದು ನಡೆದ ಶ್ರೀರಾಮ ನಿರ್ಯಾಣ ತಾಳಮದ್ದಳೆಗೆ ಬಂದಿದ್ದ ಪ್ರೇಕ್ಷಕರ ಮುಖದಲ್ಲಿ ಕಂಡ ತಾಳಮದ್ದಳೆಯ ಭಾವಗಳ ಛಾಯಚಿತ್ರ ಮಾಡುವ ಯೋಗವೊಂದು ಸಿಕ್ಕಿತು. ಇತ್ತೀಚೆಗಷ್ಟೇ ಕೋಟೇಶ್ವರದಲ್ಲೊಂದು ಶ್ರೀ ರಾಮನಿರ್ಯಾಣ ತಾಳಮದ್ದಳೆ ನೋಡಿದ್ದೆ ಕಾಲಪುರುಷವೊಂದು ಬಿಟ್ಟು ಉಳಿದೆಲ್ಲಾ ಪಾತ್ರಧಾರಿಗಳು ಅವರವರೇ ಇದ್ದುದರಿಂದ ಒಂದು ಅಂದಾಜು ಯಾವ ಮಟ್ಟಕ್ಕೆ ಆದೀತು ಅಂತ ಸತ್ಯದ ನಿರೀಕ್ಷೆ ಇತ್ತು. ಹಿಂದೊಮ್ಮೆ ಶಿರಸಿಯ ಸಪ್ತಾಹಕ್ಕೆ ಹೋಗಿ ಮೂರು ದಿನ ಇದ್ದು ತಾಳಮದ್ದಳೆ ನೋಡಿರುವುದರಿಂದ ಅಲ್ಲಿಯ ಪ್ರೇಕ್ಷಕರು ತಾಳಮದ್ದಳೆಯ ಜೊತೆಗೆ ಎಷ್ಟರ ಮಟ್ಟಿಗೆ ಸ್ಪಂದಿಸುತ್ತಾರೆ ಎಂಬ ಒಂದು ನಿರ್ದಿಷ್ಟವಾದ ನಾಡಿ ಮಿಡಿತವನ್ನು ಗೃಹಿಸಿಕೊಂಡಿದ್ದೆ. ಹಾಗಾಗಿ ಮೊದಲೇ ಪ್ಲಾನ್ ಮಾಡಿಕೊಂಡಿದ್ದೆ, ಎರಡನೇ ಭಾಗದಲ್ಲಿ ಎಷ್ಟು ನಿರಾಳವಾಗಿ ನಗುತ್ತಾರೋ, ಆ ನಂತರದ ಭಾಗದಲ್ಲಿ ಅಷ್ಟೇ ಭಾವುಕರಾಗಿ ಅಳುತ್ತಾರೆ ಎಂಬ ಸತ್ಯವನ್ನು ಮೊದಲೇ ಗೃಹಿಸಿಕೊಂಡಿದ್ದೆ. ಸಾಧ್ಯವಾದಷ್ಟು ಅದದೇ ಪ್ರೇಕ್ಷಕರ ಎರಡೂ ಭಾವಗಳ ಚಿತ್ರವನ್ನು ಸೆರೆಯಾಗಿಸಿದ್ದೇನೆ ಎಂದು ಹೇಳುವ ಧೈರ್ಯ ಮಾಡದೆ ಕಾಪಿಟ್ಟುಕೊಳ್ಳುವ ಧೈರ್ಮಾಡಿದ್ದೇನೆ ಎಂದು ಹೇಳಬಲ್ಲನಷ್ಟೇ. ಎರಡನೇ ಭಾಗದಲ್ಲಿ ಲಕ್ಷ್ಮಣ ಮತ್ತು ದೂರ್ವಾಸರ ಸಂಭಾಷಣೆ ಆಗುವಾಗ ತಮ್ಮ ತಮ್ಮ ನಗುವಿನಲ್ಲೇ ತೇಲಾಡಿದವರೇ, ಆಮೇಲಿನ ಭಾಗದಲ್ಲಿ ಶ್ರೀರಾಮ ಲಕ್ಷ್ಮಣನ ಭಾಗದಲ್ಲಿ ತಮ್ಮ ತಮ್ಮದೇ ಕಣ್ಣಿಂದಿಳಿದ ನೀರಿನಲ್ಲಿ ಮುಳುಗಿದರು. ರಾಮ : ವಾಸುದೇವ ರಂಗಾ ಭಟ್ಟರು ಲಕ್ಷ್ಮಣ : ಸಂಕದ ಗುಂಡಿ ಗಣಪತಿ ಭಟ್ ದುರವಾಸ : ಗಣೇಶ್ ಶೆಟ್ಟಿ ಕನ್ನಡಿಕಟ್ಟೆ ಫೋಟೋ ತೆಗೆಯುವಾಗ ಪ್ರೇಕ್ಷಕರಿಗೆ ಸ್ವಲ್ಪ ತೊಂದರೆ ಕೊಟ್ಟಿದ್ದೆ. ಇನ್ನೂ ಅಧಿಕ ಪ್ರಸಂಗ ಮಾಡುತ್ತಿದ್ದರೆ ಪೆಟ್ಟು ತಿನ್ನುತ್ತಿದ್ದೆ. ಸಭೆಯಿಂದ ಸಂಘಟಕರಿಗೊಂದು ಮೆಸ್ಸೇಜ್ ಬಂದಾಗ ಫೋಟೋ ತೆಗೆಯೋದು ನಿಲ್ಲಿಸಿಬಿಟ್ಟೆ. ಅಷ್ಟೊಂದು ಸೂಕ್ಷ್ಮ ಪ್ರೇಕ್ಷಕರ ಬಗ್ಗೆ ಗೌರವ ಉಂಟು. ಇಡೀ ಸಪ್ತಾಹದ ತಾಳಮದ್ದಳೆಗಳು ಆಡಿಯೋ ರೆಕಾರ್ಡ್ ಆಗಿದೆ ಇನ್ನು ಎರಡು ತಿಂಗಳೊಳಗೆ ಸಿ.ಡಿ ಆಗಿ ಮಾರುಕಟ್ಟೆಗೆ ಬರಬಹುದು. ಇದರಲ್ಲಿರುವ ಚಿತ್ರಗಳು ವಯುಕ್ತಿಕವಾಗಿ ಹೈ ಸೈಝಿನಲ್ಲಿ ಬೇಕಿದ್ದರೆ ನಿಮ್ಮ ಮೇಲ್ ಐಡಿಯನ್ನು ನನಗೆ ಮೇಲ್ ಮಾಡಿ. chanakya832@gmail.com ಅಗತ್ಯ ಬಿದ್ದರೆ ಸಂಪರ್ಕಕ್ಕೆ ಸುಧಾಕರ ಜೈನ್ ಹೊಸಬೆಟ್ಟು ಗುತ್ತು 9900500832.











































































































No comments:

Post a Comment