Saturday, October 19, 2019

ಪ್ರೇಕ್ಷರಿಗೂ ಪಾತ್ರ ಕೊಟ್ಟ ಭೀಮ ದ್ರೌಪದಿಯರು. ಯಕ್ಷ ಸಂಭ್ರಮ ಟ್ರಸ್ಟ್ (ರಿ) ಶಿರಸಿ ಅರ್ಪಿಸುತ್ತಿರುವ ಕೀರ್ತಿಶೇಷ ಶ್ರೀ ನೆಬ್ಬೂರ ನಾರಾಯಣ ಭಾಗವತರ ಸಂಸ್ಮರಣೆಯಲ್ಲಿ ಸ್ಮೃತಿ ಗೌರವ ಪಂಚಮ ವರ್ಷದ ತಾಲಮದ್ದಳೆ ಸಪ್ತಾಹ 2019. ನಾರಾಯಣ…. ನಾರಾಯಣ…. ನನ್ನ ಪ್ರೀತಿಯ ವಾಸುದೇವ ರಂಗಾಭಟ್ಟರ ಪ್ರೀತಿಯ ಒಂದೆರಡು ಅಕ್ಷರಗಳೇ, ಬೆಂಗಳೂರಿನಲ್ಲಿರುವ ನಾನು ಶಿರಸಿಯಲ್ಲಿಗೆ ತಲುಪುವ ಟಿಕೆಟ್ ಮಾಡಿಸಿತು. ಆರನೇ ದಿನದ ಪ್ರಯೋಗದಲ್ಲಿ ಸಮರ ಸನ್ನಾಹ ತಾಳಮದ್ದಳೆ. ಕತ್ತಲ ಕೋಣೆಯಲ್ಲಿ ಕನ್ನಡಿಯ ಮುಂದೆ ಕುಳಿತವನ ಮುಂದೆ ಬೆಳಗುತ್ತಿರುವ ದೀಪದ ಬೆಳಕಾಗಿ ಕಂಡದ್ದು ಸುಣ್ಣಂಬಳ ವಿಶ್ವೇಶ್ವರ ಭಟ್ಟರ ಭೀಮ, ವಾಸುದೇವ ರಂಗಾಭಟ್ಟರ ದ್ರೌಪದಿ. ಉಳಿದ ಎಲ್ಲಾ ಕಲಾವಿದರೂ ಈ ಬೆಳಗುವ ದೀಪಕ್ಕೆ ಎಣ್ಣೆಯಾದರು ಬತ್ತಿಯಾದರು. ದೀಪಸ್ಥಂಬವಾದರು, ಮುಗಿಯದ ಎಣ್ಣೆ ತುಂಬಿದ ಪಾತ್ರೆಯಾದರು. ಕತ್ತಲ ಕೋಣೆಯಲ್ಲಿ ಕುಳಿತ ನಮ್ಮ ಮುಖ ಕನ್ನಡಿಯಲ್ಲಿ ಹೊಳೆಯುತ್ತಿತ್ತು. ತುಂಬಾ ಇಷ್ಟವಾದ ಈ ಪ್ರಸಂಗದಲ್ಲಿ ಪ್ರತೀ ಪ್ರೇಕ್ಷರೂ ಪಾತ್ರಧಾರಿಗಳಾಗಿ ಕಂಡರು. ಹೀಗೆ ಕಂಡ ಕಂಡವರೆನ್ನೆಲ್ಲಾ ನನ್ನ ಕ್ಯಾಮಾರದೊಳಗೆ ಸ್ಥಾಪನೆ ಮಾಡುತ್ತಾ ಬಂದೆ. ಸ್ಥಾಪಿತ ಈ ಪಾತ್ರಗಳನ್ನು ನಿಮಗೆ ತೋರಿಸುವ ಪ್ರೀತಿ. ಇದರಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್ಟರ ಫೋಟೋ ಸ್ವಲ್ಪ ಹೆಚ್ಚೇ ಇದೆ. ಮುಂದಿನ ದಿನಗಳಲ್ಲಿ ಒಂದಷ್ಟು ಸಂಘಟಕರಿಗೆ ಈ ಚಿತ್ರಗಳು ಉಪಯೋಗವಾಗಬಹುದೆಂಬ ಭಚಿಷ್ಯದಾಸೆ. ನಿನ್ನೆಯ ದಿನ ನಾನು ಸುಣ್ಣಂಬಳರಸರ ಅರಮನೆಯ ಆಸ್ಥಾನ ಛಾಯಚಿತ್ರಗಾರನಾಗಿ ಹೋದೆ. ಅಂತಹಾ ಭೀಮ ನಮ್ಮ ಧಣಿಗಳದ್ದು. ಸುಧಾಕರ ಜೈನ್ ಹೊಸಬೆಟ್ಟು ಗುತ್ತು. 9900500832